ಮಳೆಗಾಲ ಶುರುವಾದ ಒಂದು ದಿನ ಮುಂಜಾನೆ ಹೀಗೆ ಒಂದು ಒಣಗಿದ್ದ ಕೆರೆಯಲ್ಲಿ ನಮ್ಮ ಕಪ್ಪೆಗಳ ಹುಡುಕಾಟ ನಡೆದಿತ್ತು. ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತಿತ್ತು. ಒಂದೆಡೆ ಹೀಗೆಯೇ ನೋಡುವಾಗ ೩-೪ ಕಪ್ಪೆಗಳ ಜೋಡಿಗಳು ಕಂಡವು.
![]() |
ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್ (ಹೆಣ್ಣು-ಗಂಡುಗಳು) |
![]() |
ಕರಿಮಣಿ ಸರದಂತೆ ಇರುವ ಮೊಟ್ಟೆಗಳು |
ಹೆಣ್ಣು ಒಂದು ಬಾರಿಗೆ ಸಾವಿರಗಟ್ಟಲೆ ಮೊಟ್ಟೆಗಳನ್ನು ಕರಿಮಣಿಯ ಸರದಂತೆ ಬಿಡುತ್ತ ಹೋಗುತ್ತದೆ, ಹೀಗೆ ಬಂದ ಪ್ರತಿಯೊಂದು ಕರಿಮಣಿಗೆ ಗಂಡು ತನ್ನ ವೀರ್ಯವನ್ನು ಸವರುತ್ತದೆ. ಈ ಪ್ರಕ್ರಿಯೆ ಘಂಟೆಗಟ್ಟಲೆ ನಡೆಯಬಹುದು. ಈ ಫಲೀಕರಣ ಪ್ರಕ್ರಿಯೆಯ ನಂತರ ಗಂಡು ಹೆಣ್ಣು ಬೇರ್ಪಟ್ಟು ಹೊರಟುಹೋಗುತ್ತವೆ. ಈ ಕಪ್ಪೆಗಳಲ್ಲಿ ಪಾಲನೆ/ಪೋಷಣೆ ಇಲ್ಲ.
ಈ ಪ್ರಕ್ರಿಯೆಯ ನಂತರ ಮೊಟ್ಟೆಗಳು ಕೆಲವೇ ಗಂಟೆಗಳಲ್ಲಿ ಒಡೆದು ಗೊದಮೊಟ್ಟೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಹಲವೇ ದಿನಗಳಲ್ಲಿ ಅವು ಪಾಚಿ, ಸೂಕ್ಷ್ಮಜೀವಿಗಳನ್ನು ತಿಂದು, ಕಾಲು ಕೈಗಳು ಬಂದು ಬಾಲ ಹೋಗಿ ವಯಸ್ಕ ಕಪ್ಪೆಗಳ ರೂಪ ತಾಳುತ್ತವೆ. ಈ ಮೊಟ್ಟೆಯಿಂದ ಗೊದಮೊಟ್ಟೆಗಳಾಗಿ, ಕಪ್ಪೆಗಳಾಗಿ ಮಾರ್ಪಾಡಾಗುವ ಪ್ರಕ್ರಿಯೆಗೆ metamorphosis ಎನ್ನುತ್ತಾರೆ. ಇಲ್ಲಿ ಮರಿಗಳ ಪೋಷಣೆ ಇಲ್ಲದಿರುವುದರಿಂದ ಈ ಮೊಟ್ಟೆಗಳು ನಿಸರ್ಗದಲ್ಲಿ ಬದುಕಿ ಉಳಿಯುವುದು ವಿರಳ. ಸಾವಿರಾರು ಮೊಟ್ಟೆಗಳಲ್ಲಿ ಶೇ. ೧೦ರಕ್ಕಿಂತಲೂ ಕಡಿಮೆ ಪ್ರೌಢಾವಸ್ಥೆಗೆ ಬರುತ್ತವೆ.