ಅದೇ ದಿನ ಅಪಾಯದ ಅಂಚಿನಲ್ಲಿರುವ ಅಂಬೋಲಿ ಪೊದೆ ಕಪ್ಪೆ ನನಗೆ ಕಂಡಿತು. ಕೈ ಬೆರಳಿನ ಉಗುರಿನಷ್ಟು ಸಣ್ಣದಾಗಿತ್ತು.
 |
ಅಂಬೋಲಿ ಪೊದೆ ಕಪ್ಪೆ (Pseudophilautus amboli) |
ಇನ್ನು ಒಮ್ಮೆ ಅದೇ ಊಟದ ಹಾಲ್ನಿಂದ ಹೊರ ಬರುವಾಗ ನನ್ನ ಗೆಳೆಯನಾದ ಮಂಜುನಾಥನಿಗೆ ಕಂಡದ್ದು
Uperodon variegata. ಇದು ಕೂಡ ಮಳೆಯಾದ ನಂತರವೇ ಕಂಡದ್ದು.
 |
Uperodon variegata |
ನಾವು ಒಮ್ಮೆ ಕೊಡಚಾದ್ರಿಯ ಹತ್ತಿರ ಇರುವ ಹಿಡ್ಲುಮನೆ ಜಲಪಾತದ ಹತ್ತಿರ ಹೋದಾಗ ಅದೆಷ್ಟೋ ಕಪ್ಪೆಗಳು ಕಂಡವು. ಮೊದಲಿಗೆ ಕಂಡದ್ದು Indian Skittering Frog (
Euphlyctis sp.). ಇದು ತುಂಬಾ ಸಕ್ರಿಯ ಕಪ್ಪೆ. ನೆಗೆಯುವುದನ್ನು ಹಿಡಿಯುವುದು ಕಷ್ಟ.
 |
Euphlyctis sp. |
ಅಲ್ಲೇ ಸಮೀಪದಲ್ಲಿ ಅತಿ ಮೆಲ್ಲಗೆ ಹರಿಯುವ ಹಳ್ಳದಲ್ಲಿ ಗೊದಮೊಟ್ಟೆಗಳು ಕಂಡವು. ನೂರಾರು ಸಂಖ್ಯೆಯಲ್ಲಿದ್ದ ಇವು Bicolored frog (
Clinotarsus curtipes) ಎಂದು.
 |
Bicolored frog ಗೊದಮೊಟ್ಟೆಗಳು |
 |
Bicolored frog ಗೊದಮೊಟ್ಟೆ |
ಮೇ ತಿಂಗಳಲ್ಲಿ ಇನ್ನೇನು ಮಳೆ ಶುರುವಾಯ್ತು ಎನ್ನುವಾಗ ನನ್ನ ಕೋಣೆಯ ಒಳಗೆ ಬಂದ ಅತಿಥಿ Indian Tree Frog (
Polypedates maculotus). ತುಂಬಾ ಸೌಮ್ಯ ಸ್ವಭಾವದ ಕಪ್ಪೆ. ಕೋಣೆಯಲ್ಲಿ ಎಷ್ಟೋ ಹೊತ್ತು ಗೋಡೆಯ ಮೇಲೆ ಕುಳಿತಿತ್ತು.
 |
Indian Tree Frog |
ಹೆಸರೇ ಹೇಳುವ ಹಾಗೆ ಇವು ಮರ ಎರಬಲ್ಲವು. ಇವುಗಳು ಎಲೆಗಳ ತುದಿಯಲ್ಲಿ ನೊರೆಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಎರಡನೆ ಮಹಡಿ ಏರಿ ನನ್ನ ಟೇಬಲ್ಲಿನ ಮೇಲೆ ಕುಳಿತಿರುವ ಚಿತ್ರ ನೀವು ನೋಡಬಹುದು.
ಇನ್ನು, ಕೊಪ್ಪಳದಲ್ಲಿ ಒಮ್ಮೆ ಹೀಗೆ ತಿರುಗಲು ಹೋದಾಗ ಒಂದು ಕೆರೆಯಲ್ಲಿ ಕಂಡ ಕಪ್ಪೆಯ ಜೋಡಿ. ಇದರ ಹೆಸರು ಭಾರತೀಯ ಗೋಂಕರು ಕಪ್ಪೆ. ಇವುಗಳನ್ನು ಇದರ ತೊಡೆಮಾಂಸಕ್ಕಾಗಿ ಹಿಡಿದು ಅಕ್ರಮವಾಗಿ ಮಾರುತ್ತಾರೆ.