ಭಾನುವಾರ, ಸೆಪ್ಟೆಂಬರ್ 6, 2015

ಈ ಕಪ್ಪೆಗಳನ್ನು ಕಂಡಿದಿರಾ?

Common Asian Toad(Duttaphrynus melanostictus), "Bufo melanostictus front". Licensed
under Creative Commons Attribution 2.5 via Wikimedia Commons.

ನನ್ನ ಆಸಕ್ತಿಗಳಲ್ಲಿ ಈಗ ಕಪ್ಪೆಯೂ ಒಂದು. ಸಾಮಾನ್ಯವಾಗಿ Common Asian Toad ಒಂದನ್ನೇ ಬಯಲು ಸೀಮೆಯಲ್ಲಿ ನಾನು ನೋಡಿದ್ದೆ, ಶಿವಮೊಗ್ಗದ ಸಹ್ಯಾದ್ರಿ ಬೆಟ್ಟಗಳ ಹತ್ತಿರ ಬಂದಾಗ  ನನಗೆ ಬಗೆಬಗೆಯ ಕಪ್ಪೆಗಳು ಕಾಣಸಿಗತೊಡಗಿದವು. ಕ್ರಮೇಣ ಹೊಸ ಕಪ್ಪೆಗಳನ್ನು ಹುಡುಕಿಕೊಂಡು ಹೊರಟೆ. ಆಗ ನನಗೆ ನಮ್ಮ ಕ್ಯಾಂಪಸ್ನಲ್ಲಿಯೇ ಮೊದಲು ಕಂಡದ್ದು, Zakerana  sp.  
(ಭತ್ತದ ಗದ್ದೆ ಕಪ್ಪೆ) Fejervarya  sp. 
ಸಾಮಾನ್ಯವಾಗಿ ಕಾಣಸಿಗುವ ಈ ಕಪ್ಪೆ ನೀರು ಇರುವ ಕಡೆ ವಾಸಿಸುತ್ತದೆ.

ಇದಾದ ಎಷ್ಟೋ ದಿನಗಳ ನಂತರ, ಬೆಳೆಗ್ಗೆ ತಿಂಡಿ ಮುಗಿಸಿ ಮೆಸ್ಸಿನಿಂದ ಹೊರ ಬರುತಿದ್ದೆ. ಸ್ವಲ್ಪ ಮುಂದೆ ಮೆಟ್ಟಿಲುಗಳ ಬಳಿ ಇಳಿದು ಮೂಲೆಯಲ್ಲಿ ನೋಡಿದಾಗ  ೬-೭ ಬೇರೆ ಬೇರೆ ತರದ ಕಪ್ಪೆಗಳು ಕಂಡವು. ಬೇಗನೆ ಕ್ಯಾಮೆರಾ ತರಲು ಹೋದೆ. ಹಿಂದಿನ ದಿನ ಮಳೆಯಾಗಿತ್ತು. ಆಗ ನನಗೆ ಕಂಡದ್ದು, Sri Lankan Painted Frogs . 
Sri Lankan Painted Frog. 
ಈ ಕಪ್ಪೆಗಳು ಮಳೆಯಾದ ಕೂಡಲೇ ಆಚೆಗೆ ಬರುತ್ತವೆ.
ಅದೇ ದಿನ ಅಪಾಯದ ಅಂಚಿನಲ್ಲಿರುವ ಅಂಬೋಲಿ ಪೊದೆ ಕಪ್ಪೆ ನನಗೆ ಕಂಡಿತು.  ಕೈ ಬೆರಳಿನ ಉಗುರಿನಷ್ಟು ಸಣ್ಣದಾಗಿತ್ತು. 
ಅಂಬೋಲಿ ಪೊದೆ ಕಪ್ಪೆ (Pseudophilautus amboli)

ಇನ್ನು ಒಮ್ಮೆ ಅದೇ ಊಟದ ಹಾಲ್ನಿಂದ ಹೊರ ಬರುವಾಗ ನನ್ನ ಗೆಳೆಯನಾದ ಮಂಜುನಾಥನಿಗೆ ಕಂಡದ್ದು Uperodon variegata. ಇದು ಕೂಡ ಮಳೆಯಾದ ನಂತರವೇ ಕಂಡದ್ದು.
Uperodon variegata 
ನಾವು ಒಮ್ಮೆ ಕೊಡಚಾದ್ರಿಯ ಹತ್ತಿರ ಇರುವ ಹಿಡ್ಲುಮನೆ ಜಲಪಾತದ ಹತ್ತಿರ ಹೋದಾಗ ಅದೆಷ್ಟೋ ಕಪ್ಪೆಗಳು ಕಂಡವು. ಮೊದಲಿಗೆ ಕಂಡದ್ದು Indian Skittering Frog (Euphlyctis sp.). ಇದು ತುಂಬಾ ಸಕ್ರಿಯ ಕಪ್ಪೆ. ನೆಗೆಯುವುದನ್ನು ಹಿಡಿಯುವುದು ಕಷ್ಟ. 
Euphlyctis sp.  
ಅಲ್ಲೇ ಸಮೀಪದಲ್ಲಿ ಅತಿ ಮೆಲ್ಲಗೆ ಹರಿಯುವ ಹಳ್ಳದಲ್ಲಿ ಗೊದಮೊಟ್ಟೆಗಳು ಕಂಡವು. ನೂರಾರು ಸಂಖ್ಯೆಯಲ್ಲಿದ್ದ ಇವು  Bicolored frog (Clinotarsus curtipes) ಎಂದು.
Bicolored frog ಗೊದಮೊಟ್ಟೆಗಳು 

Bicolored frog ಗೊದಮೊಟ್ಟೆ 




ಮೇ ತಿಂಗಳಲ್ಲಿ ಇನ್ನೇನು ಮಳೆ ಶುರುವಾಯ್ತು ಎನ್ನುವಾಗ ನನ್ನ ಕೋಣೆಯ ಒಳಗೆ ಬಂದ ಅತಿಥಿ Indian Tree Frog (Polypedates maculotus). ತುಂಬಾ ಸೌಮ್ಯ ಸ್ವಭಾವದ ಕಪ್ಪೆ. ಕೋಣೆಯಲ್ಲಿ ಎಷ್ಟೋ ಹೊತ್ತು ಗೋಡೆಯ ಮೇಲೆ ಕುಳಿತಿತ್ತು.
Indian Tree Frog
ಹೆಸರೇ ಹೇಳುವ ಹಾಗೆ ಇವು ಮರ ಎರಬಲ್ಲವು. ಇವುಗಳು ಎಲೆಗಳ ತುದಿಯಲ್ಲಿ ನೊರೆಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಎರಡನೆ ಮಹಡಿ ಏರಿ ನನ್ನ ಟೇಬಲ್ಲಿನ ಮೇಲೆ ಕುಳಿತಿರುವ ಚಿತ್ರ ನೀವು ನೋಡಬಹುದು.

ಇನ್ನು,  ಕೊಪ್ಪಳದಲ್ಲಿ ಒಮ್ಮೆ ಹೀಗೆ ತಿರುಗಲು ಹೋದಾಗ ಒಂದು ಕೆರೆಯಲ್ಲಿ ಕಂಡ ಕಪ್ಪೆಯ ಜೋಡಿ. ಇದರ ಹೆಸರು ಭಾರತೀಯ ಗೋಂಕರು ಕಪ್ಪೆ. ಇವುಗಳನ್ನು ಇದರ ತೊಡೆಮಾಂಸಕ್ಕಾಗಿ ಹಿಡಿದು ಅಕ್ರಮವಾಗಿ ಮಾರುತ್ತಾರೆ.


ಕಪ್ಪೆಗಳಲ್ಲಿ ೨೫೦ಕ್ಕಿಂತ ಹೆಚ್ಚು ಪ್ರಬೇಧಗಳು ಭಾರತದಲ್ಲಿ ಪತ್ತೆಯಾಗಿವೆ. ಪಶ್ಚಿಮ ಘಟ್ಟಗಳು ಒಂದು ಅಪೂರ್ವ ಜೀವವೈವಿಧ್ಯತಾ  ತಾಣವಾಗಿದೆ. ಇಂತಹ ಕಪ್ಪೆಗಳು ಅತಿನೇರಳೆ ವಿಕಿರಣ, ಖಿಟ್ರಿಡ್ ಶಿಲೀಂಧ್ರ, ಕೀಟನಾಶಕಗಳು, ಜಾಗತಿಕ ತಾಪಮಾನ ಹೆಚ್ಚಳ ಮುಂತಾದ ಕಾರಣಗಳಿಂದ ಸಂಖ್ಯೆಗಳಲ್ಲಿ ಇಳಿಮುಖ ಕಾಣುತ್ತಿವೆ. ಕಪ್ಪೆಗಳು ಪರಿಸರದ ಬಹುಮುಖ್ಯ ಜೇವಿಗಳು. ಇವನ್ನು ಉಳಿಸಿಕೊಳ್ಳುವುದು ಹುಲಿಗಳಷ್ಟೇ  ಮುಖ್ಯ.

(ಚಿತ್ರಗಳು ಮೇಲೆ ಹೇಳಿರುವ ಕಡೆಗಳಲ್ಲಿ ಬಿಟ್ಟು ಉಳಿದಿರುವವೆಲ್ಲ ಲೇಖಕರವು)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ